ಡಿಕ್ಕಿ ಮಾದವ ರಾವ್ ಭಾರತದ ನಟ ಮತ್ತು ಗಾಯಕ, ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಜನಪ್ರೀಯರಾಗಿದ್ದರು. ೧೯೩೬ರ ಸಂಸಾರ ನೌಕ ಚಿತ್ರದಲ್ಲಿನ ಖಳನಟ ಕನ್ಯಾಕುಮಾರಿ ದೀಕ್ಷಿತ್ "ಡಿಕ್ಕಿ" ಪಾತ್ರದ ಮೂಲಕ ಚಿರಪರಿಚಿತರಾದರು. ನಂತರ ಡಿಕ್ಕಿ ಎಂಬ ಹೆಸರು ಅವರೊಂದಿಗೆ ಉಳಿದುಕೊಂಡು ಬಿಟ್ಟಿತು. ಆಗಿನ ಕಾಲದ ಜನಪ್ರೀಯ ನಟರಾದ ಹೆಚ್.ಎಲ್.ಎನ್.ಸಿಂಹ ಮತ್ತು ಬಿ.ಆರ್. ಪಂತುಲುರವರೊಂದಿಗೆ ಮೊಹಮದ್ ಪೀರರ ಚಂದ್ರಕಲಾ ನಾಟಕ ಕಂಪನಿಯಲ್ಲಿ ನಟನಾಗಿ ಕೆಲಸ ಮಾಡಿದ್ದರು. ಮೊದಲ ಬಾರಿಗೆ ೧೯೫೫ರ ಕನ್ನಡ ಮತ್ತು ತಮಿಳು ದ್ವಿಭಾಷ ಚಿತ್ರ ಮೊದಲ ತೇದಿ ಮೂಲಕ ಹಿನ್ನಲೆ ಗಾಯಕರಾದರು, " ಒಂದರಿಂದ ಇಪ್ಪತ್ತರ" ಎಂಬ ಹಾಡನ್ನು ಹಾಡಿದ್ದರು. == ಚಲನಚಿತ್ರಗಳ ಪಟ್ಟಿ (ಅಪೂರ್ಣ) == ಸಂಸಾರ ನೌಕ (1936). . . ಕನ್ಯಾಕುಮಾರಿ ದೀಕ್ಷಿತ್ "ಡಿಕ್ಕಿ" ಶಿವಶರಣೆ ನಂಬಿಯಕ್ಕ (1955) ಸ್ಕೂಲ್ ಮಾಸ್ಟರ್ (1958) ಅಬ್ಬಾ ಆ ಹುಡುಗಿ (1959) ಶ್ರೀ ಶೈಲ ಮಹಾತ್ಮೆ (1961) ಸಾಕು ಮಗಳು (1963) ಮನೆ ಅಳಿಯ (1964) ಬ್ಲ್ಯಾಕ್ ಮಾರ್ಕೆಟ್ (1967) ಮಣ್ಣಿನ ಮಗ (1968) ಅಂತ (1981) ಬೆಕ್ಕಿನ ಕಣ್ಣು (1984) == ಉಲ್ಲೇಖಗಳು ==